ಕನ್ನಡ

ಸಮಯದ ಬಗ್ಗೆ

ನನ್ನನ್ನು ಅರಿತುಕೊಳ್ಳಲು ನಿನ್ನ ಸಮಯವನ್ನು ಉಪಯೋಗಿಸು.
ನನಗೆ ಕಿವಿಗೊಡು ಮತ್ತು ನನ್ನನ್ನೇ ನಿನಗೆ ನೀಡಲು ನನಗೆ ಅವಕಾಶಕೊಡು.
ಉಪಯೋಗಿಸಿಕೊಳ್ಳಲು ನಾನು ನಿನಗೆ ಸಮಯವನ್ನು ನೀಡುತ್ತೇನೆ.
ಆನಂದಿಸಲು ನಾನು ನಿನಗೆ ಸಮಯವನ್ನು ನೀಡುತ್ತೇನೆ.
ಈ ಕೊಡುಗೆಯೊಂದಿಗೆ ಶಾಂತಿಯಿಂದಿರು.

ನಿನಗೆ ದೊರೆತ ಸಮಯದ ಕೊಡುಗೆಯನ್ನು ನಿರ್ವಹಿಸು
  ನಾನು ನಿನಗೆ ನೀಡುವ ಮಾರ್ಗದರ್ಶನದಂತೆ.
ಇತರರ ಮೂಲಕ ನಾನು ನಿನಗೆ ಹೇಳುವ ಮಾತುಗಳಿಗೆ ಕಿವಿಗೊಡು.
ಈ ವಿವೇಕದ ನುಡಿಗಳನ್ನು ನನ್ನಿಂದ ಸ್ವೀಕರಿಸು
  ಮತ್ತು ಈ ಅರಿವಿನಿಂದ ನಿನ್ನ ಅಮೂಲ್ಯ ಸಮಯವನ್ನು ನಿರ್ವಹಿಸು.

ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಡ,
  ಏಕೆಂದರೆ ಈ ಪ್ರಯತ್ನಗಳಿಂದ ನೀನು ದಣಿದುಹೋಗುವೆ.
ನಿನಗೆ ನೀಡಲಾಗುವ ವಿವೇಕದ ನುಡಿಗಳಲ್ಲಿ
  ಭರವಸೆಯಿಡಲು ಸಿದ್ಧನಾಗಿರು.

ನಿನ್ನ ಅಪನಂಬಿಕೆಯನ್ನು ಬಿಟ್ಟುಬಿಡು
  ಅದು ನಿನ್ನನ್ನು ನನ್ನ ಕಡೆಗೆ ನಡೆಸುವುದಿಲ್ಲ.
ನಾನು ನಿನಗೆ ಹಾನಿ ಮಾಡುವುದಿಲ್ಲ.
ಒಬ್ಬ ಹೆಣ್ಣುಮಗು ತನ್ನ ತಾಯಿತಂದೆಗಳಲ್ಲಿ ಭರವಸೆಯಿಡುವಂತೆ ನನ್ನಲ್ಲಿ ಭರವಸೆಯಿಡು.

ನಿನ್ನನ್ನು ಮುನ್ನಡೆಸಲು ನನಗೆ ಅವಕಾಶಕೊಡು.
ನಿನಗೆ ಸಹಾಯ ಮಾಡಲು ನನಗೆ ಅವಕಾಶಕೊಡು.
ನಿನ್ನನ್ನು ಆಶೀರ್ವದಿಸಲು ನನಗೆ ಅವಕಾಶಕೊಡು.
ನಿನ್ನ ಅಪನಂಬಿಕೆಯಿಂದ ನಿನ್ನನ್ನು ಗುಣಪಡಿಸಲು ನನಗೆ ಅವಕಾಶಕೊಡು.
ನಿನ್ನ ಸಮಯವನ್ನು ನನಗೆ ಕೊಡು.

ನೀನು ಹೀಗೆ ಮಾಡಿದರೆ,
  ಆಶೀರ್ವಾದಭರಿತವಾದ ಮತ್ತು ನಿನಗೆ ತಿಳಿಯದಿರುವ
  ಎಲ್ಲವನ್ನೂ ನಾನು ನಿನಗೆ ನೀಡುವೆನು.

ಮುಂದಿನ ಧ್ಯಾನ

ಪರಿವಿಡಿ

ಈ ಪುಟವನ್ನು ಹಂಚಿಕೊಳ್ಳಿ: