ಕನ್ನಡ

ಪ್ರಾರ್ಥಿಸುವುದು

ನನ್ನೊಂದಿಗೆ ಮಾತನಾಡುವುದರ ಮೂಲಕ, ನೀನು ನಿನ್ನ ಜೀವಿತದಲ್ಲಿ
  ಎದುರಿಸುವುದನ್ನು ಅರ್ಥಮಾಡಿಕೊಳ್ಳಲು ನಾನು ನಿನಗೆ ನೆರವಾಗಬಲ್ಲೆ.
ನನ್ನೊಂದಿಗೆ ಕಳೆಯುವ ಆ ಸಮಯವು ಶಾಂತಿಯಿಂದ ಕೂಡಿರಬೇಕು.

ನಾವು ಒಬ್ಬರನ್ನೊಬ್ಬರು ಆಪ್ತವಾಗಿ ಅರಿತುಕೊಳ್ಳಬೇಕು.
ನನ್ನೊಂದಿಗೆ ಮಾತನಾಡುತ್ತಾ, ಆಲಿಸುತ್ತಾ, ನಿನ್ನ ಸುತ್ತಲೂ
  ನಾನು ಮಾಡುವ ಕಾರ್ಯಗಳನ್ನು ನೋಡುತ್ತಾ, ಅವುಗಳ ಅರಿವನ್ನು ಹೊಂದುವ ಮೂಲಕ ಹೀಗೆ ಮಾಡು.

ನೀನು ಸಂತೋಷದಿಂದಲೂ ಆನಂದದಿಂದಲೂ ತುಂಬಿರಬೇಕೆಂದು ನಾನು ಬಯಸುತ್ತೇನೆ ಎಂಬುದನ್ನು
  ನಿನಗೆ ತೋರಿಸುವ ನನ್ನ ವಿಧಾನ ಇದು.
ನಿನ್ನ ಪ್ರಾರ್ಥನೆಯು ಮುಕ್ತವಾಗಿಯೂ ಶಾಂತಿಯಿಂದ ತುಂಬಿದ್ದಾಗಿಯೂ ಇರಬೇಕು.
ನನ್ನನ್ನು ಆಳವಾಗಿ ಅರಿತುಕೊಳ್ಳಲು ನನ್ನೊಂದಿಗೆ ಸಮಯ ಕಳೆ.

ನಾನು ನಿನಗೆ ಅನೇಕ ಸೂಚನೆಗಳನ್ನೂ ಆಶೀರ್ವಾದಗಳನ್ನೂ ನೀಡುವೆನು,
  ನಿನ್ನ ಪ್ರಾರ್ಥನೆಗಳ ವಿಷಯದಲ್ಲಿ ನಿನ್ನ ಆತ್ಮವಿಶ್ವಾಸ ಹೆಚ್ಚಲು ನೆರವಾಗುವಂತೆ.

ನಿನ್ನ ಹೊರೆಗಳನ್ನು ನನ್ನ ಬಳಿ ಇಡಲು ಹೆದರಬೇಡ,
  ಏಕೆಂದರೆ ನನ್ನ ದೃಷ್ಟಿಯಲ್ಲಿ ಅವು ಚಿಕ್ಕವು.

ಇನ್ನೂ ಹೆಚ್ಚಿನದನ್ನು ಕೇಳಲು ನಾನು ಕ್ರಮೇಣ ನಿನಗೆ ನೆರವಾಗುವೆನು.
ನೀನು ನನ್ನನ್ನು ಪ್ರೀತಿಸುತ್ತೀಯೆಂದು ನನಗೆ ಹೇಳು ಮತ್ತು ನನ್ನ ಮೇಲಿನ ಈ ಪ್ರೀತಿಯನ್ನು ನಿನ್ನ ಬದುಕಿನಲ್ಲಿ ತೋರಿಸು.
ನಿನ್ನ ಸುತ್ತಲಿರುವವರೊಂದಿಗಿನ ಒಡನಾಟದಲ್ಲಿ ಇದನ್ನು ಮಾಡಬಹುದು.

ಸ್ವಾರ್ಥಿಯಾಗಬೇಡ ಅಥವಾ ತಾಳ್ಮೆ ಕಳೆದುಕೊಳ್ಳಬೇಡ,
  ನನ್ನೊಂದಿಗೆ ಕಳೆಯುವ ನಿನ್ನ ಸಮಯದ ವಿಷಯದಲ್ಲಿ,
  ಏಕೆಂದರೆ ಇದು ನನ್ನ ಶಾಂತಿಯ ಕಡೆಗೆ ನಿನ್ನನ್ನು ನಡೆಸುವುದಿಲ್ಲ.

ಮುಂದಿನ ಧ್ಯಾನ

ಪರಿವಿಡಿ

ಈ ಪುಟವನ್ನು ಹಂಚಿಕೊಳ್ಳಿ: