ನಿನಗಿರುವ ಈ ಸಮಯವು ನನ್ನ ಕೊಡುಗೆಯಾಗಿದೆ.
ಅದನ್ನು ಬಹಳ ಜಾಗರೂಕತೆಯಿಂದ ಬಳಸು,
ಏಕೆಂದರೆ ನಾನು ನಿರ್ಧರಿಸಿದಂತೆ ಅದು ಕೊನೆಗೊಳ್ಳುತ್ತದೆ.
ಇತರರ ಅಗತ್ಯಗಳನ್ನು ಪೂರೈಸಲು ಈ ಕೊಡುಗೆಯನ್ನು ಬಳಸು.
ಅವರು ತಮ್ಮ ಕೊಡುಗೆಗಳಲ್ಲಿ ಆನಂದಿಸಲು ನೆರವಾಗು,
ನಾನು ನಿನಗೆ ನೆರವಾಗುವಂತೆಯೇ.
ನೀನು ನಿನ್ನ ಕೊಡುಗೆಗಳನ್ನು ನನ್ನಿಂದ ಬೇಡುವಂತಾಗಲಿ.
ನೀನು ಅಪಾರ ಸಂತೋಷವನ್ನು ತರುವಂತಾಗಲಿ
ನಿನ್ನ ಸುತ್ತಲಿರುವವರಿಗೆ.
ಇದಕ್ಕಿಂತ ಮಿಗಿಲಾದ ದಾನ ಇನ್ನಾವುದಿದೆ?
ನಿನ್ನ ಸಂಪರ್ಕಕ್ಕೆ ಬರುವವರಿಗೆ ಶಾಂತಿಯನ್ನು ತಂದುಕೊಡು.
ಅವರಿಗೆ ಆನಂದವನ್ನೂ ಶಾಂತಿಯನ್ನೂ ನೀಡು.
ನೋವಿನಿಂದ ನರಳುವವರಿಗೆ ಜೀವವನ್ನು ತಂದುಕೊಡು.
ಈ ಸಂಕಟದ ಸಮಯವನ್ನು ದಾಟಲು ಅವರಿಗೆ ನೆರವಾಗು.
ತಮ್ಮ ಪರಿಸ್ಥಿತಿಗಳ ಬಗ್ಗೆ ಕೋಪಗೊಂಡಿರುವವರೊಂದಿಗೆ ಸೌಮ್ಯವಾಗಿ ವರ್ತಿಸು.
ಅವರು ನಿನ್ನ ದಾರಿಯಲ್ಲಿ ಎದುರಾದಾಗ ಅವರಿಗೆ ವಿವೇಕವನ್ನು ತಂದುಕೊಡು.
ನಿನ್ನ ಕಣ್ಣುಗಳಿಂದ ಕರುಣೆ ಹೊರಹೊಮ್ಮಲಿ
ಮತ್ತು ಅವರ ನೋವಿನೊಳಗೆ ಹರಿಯಲಿ.
ನಿನ್ನ ಶಕ್ತಿ ಅವರ ನೋವನ್ನು ಗುಣಪಡಿಸುತ್ತದೆ.
ಗುಣಹೊಂದಲೆಂದು ನಾನು ಅವರನ್ನು ನಿನ್ನ ಬಳಿಗೆ ತರುತ್ತೇನೆ.
ನನ್ನ ಶಕ್ತಿ ಅವರೊಳಗೆ ಹರಿಯಲಿ.
ಈ ಜನರಿಗೆ ನನ್ನ ಶಕ್ತಿ ಬೇಕಾಗಿದೆ.
ಈ ಉದ್ದೇಶಕ್ಕಾಗಿ ನಾನು ನಿನ್ನನ್ನು ಬಳಸಿಕೊಳ್ಳಲು ಅವಕಾಶ ಕೊಡು.
