ಕನ್ನಡ

ಕುಟುಂಬಗಳಿಗಾಗಿ ಪ್ರಾರ್ಥನೆ

ಪ್ರೀತಿಯೂ ಕರುಣೆಯೂ ಉಳ್ಳ ನಮ್ಮ ತಂದೆಯಾದ ದೇವರೇ, ಎಲ್ಲ ಕುಟುಂಬಗಳನ್ನು ಒಗ್ಗೂಡಿಸಿ, ಪ್ರೀತಿ ಮತ್ತು ಪರಸ್ಪರ ಬೆಂಬಲದ ಪರಿಪೂರ್ಣ ಐಕ್ಯತೆಯಲ್ಲಿ ಕಾಪಾಡಿರಿ.

ಪ್ರತಿಯೊಬ್ಬ ಸದಸ್ಯರಲ್ಲಿಯೂ ಪರಸ್ಪರ ತಿಳಿವಳಿಕೆ ಮತ್ತು ವಾತ್ಸಲ್ಯದ ಮನೋಭಾವವನ್ನು ತುಂಬಿರಿ.

ಜಗಳಗಳನ್ನೂ ಕಹಿಭಾವನೆಯನ್ನೂ ಅವರಿಂದ ದೂರವಿಡಿರಿ; ಅವರಿಂದ ಕೆಲವೊಮ್ಮೆ ತಪ್ಪುಗಳಾದಾಗ, ಕ್ಷಮೆ ಮತ್ತು ಶಾಂತಿಯನ್ನು ಅವರಲ್ಲಿ ತುಂಬಿರಿ.

ತಂದೆತಾಯಿಯರ ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯವು ಉತ್ತಮ ಮಾದರಿಯಾಗಲಿ.

ಮಕ್ಕಳು ಇತರರನ್ನು ಗೌರವಿಸುವಂತೆಯೂ ಪ್ರಬುದ್ಧ ಸ್ವಾವಲಂಬನೆಯಲ್ಲಿ ಬೆಳೆಯುವಂತೆಯೂ ಅವರಲ್ಲಿ ಆತ್ಮಗೌರವವನ್ನು ತುಂಬಿರಿ.

ನಮ್ಮ ಪ್ರಭುವೂ ರಕ್ಷಕರೂ ಆದ ಯೇಸು ಕ್ರಿಸ್ತರ ಮೂಲಕ, ಕುಟುಂಬಗಳ ಪರಸ್ಪರ ವಾತ್ಸಲ್ಯ ಮತ್ತು ಗೌರವವು ಇಹದಲ್ಲಿಯೂ ಪರದಲ್ಲಿಯೂ ಕ್ರೈಸ್ತ ಜೀವನದ ಸಂಕೇತವಾಗಲಿ.

ಆಮೆನ್.


ಇನ್ನಷ್ಟು ಪ್ರಾರ್ಥನೆಗಳು

ದೈನಂದಿನ ಧ್ಯಾನಗಳು

ಈ ಪುಟವನ್ನು ಹಂಚಿಕೊಳ್ಳಿ: