ಕನ್ನಡ

ರಾಜಾಧಿರಾಜ ಕ್ರಿಸ್ತರಿಗೆ ಪ್ರಾರ್ಥನೆ

ಓ ನಮ್ಮ ದೇವರಾದ ಪ್ರಭುವೇ, ನೀವೊಬ್ಬರೇ ಪರಮಪವಿತ್ರ ರಾಜರೂ ಎಲ್ಲ ಜನಾಂಗಗಳ ಅಧಿಪತಿಯೂ ಆಗಿದ್ದೀರಿ.

ಪ್ರಭುವೇ, ಓ ದೈವಿಕ ರಾಜರೇ, ನಿಮ್ಮಿಂದ ಕರುಣೆ, ಶಾಂತಿ, ನ್ಯಾಯ ಮತ್ತು ಸಕಲ ಒಳಿತುಗಳನ್ನು ಪಡೆಯುವ ಮಹಾ ನಿರೀಕ್ಷೆಯಿಂದ ನಾವು ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಓ ನಮ್ಮ ರಾಜರಾದ ಪ್ರಭುವೇ, ನಮ್ಮ ಕುಟುಂಬಗಳನ್ನು ಮತ್ತು ನಮ್ಮ ಜನ್ಮಭೂಮಿಯನ್ನು ರಕ್ಷಿಸಿರಿ.

ಓ ಪರಮ ನಿಷ್ಠಾವಂತರೇ, ನಮ್ಮನ್ನು ಕಾಪಾಡಿರೆಂದು ಪ್ರಾರ್ಥಿಸುತ್ತೇವೆ.

ನಮ್ಮ ಶತ್ರುಗಳಿಂದಲೂ ನಿಮ್ಮ ನ್ಯಾಯಯುತವಾದ ತೀರ್ಪಿನಿಂದಲೂ ನಮ್ಮನ್ನು ರಕ್ಷಿಸಿರಿ.

ಓ ಸಾರ್ವಭೌಮ ರಾಜರೇ, ನಿಮ್ಮ ವಿರುದ್ಧ ನಾವು ಮಾಡಿದ ಪಾಪಗಳನ್ನು ಕ್ಷಮಿಸಿರಿ.

ಯೇಸುವೇ, ನೀವು ಕರುಣೆಯ ರಾಜರಾಗಿದ್ದೀರಿ.

ನಾವು ನಿಮ್ಮ ನ್ಯಾಯಯುತವಾದ ತೀರ್ಪಿಗೆ ಪಾತ್ರರಾಗಿದ್ದೇವೆ

ಪ್ರಭುವೇ, ನಮ್ಮ ಮೇಲೆ ಕರುಣೆ ತೋರಿಸಿರಿ ಮತ್ತು ನಮ್ಮನ್ನು ಕ್ಷಮಿಸಿರಿ.

ನಿಮ್ಮ ಮಹಾ ಕರುಣೆಯಲ್ಲಿ ನಾವು ಭರವಸೆ ಇಟ್ಟಿದ್ದೇವೆ.

ಓ ಅಪಾರ ಭಯಭಕ್ತಿಯನ್ನು ಮೂಡಿಸುವ ರಾಜರೇ, ನಾವು ನಿಮ್ಮ ಮುಂದೆ ತಲೆಬಾಗಿ ಪ್ರಾರ್ಥಿಸುತ್ತೇವೆ;

ನಿಮ್ಮ ಆಳ್ವಿಕೆಯು, ನಿಮ್ಮ ರಾಜ್ಯವು, ಭೂಮಿಯ ಮೇಲೆ ಅಂಗೀಕರಿಸಲ್ಪಡಲಿ.

ಆಮೆನ್.


ಇನ್ನಷ್ಟು ಪ್ರಾರ್ಥನೆಗಳು

ದೈನಂದಿನ ಧ್ಯಾನಗಳು

ಈ ಪುಟವನ್ನು ಹಂಚಿಕೊಳ್ಳಿ: