ನೀವು ಪ್ರೀತಿಸುವವರೊಂದಿಗೆ ಒಟ್ಟಿಗೆ ಇರುವಾಗ,
ನಾನು ಆನಂದಿಸುತ್ತೇನೆ.
ನನ್ನನ್ನು ಸ್ತುತಿಸಲು ಮತ್ತು ಒಬ್ಬರನ್ನೊಬ್ಬರು ಪ್ರಶಂಸಿಸಲು ಈ ಸಮಯವನ್ನು ಬಳಸಿಕೊಳ್ಳಿ.
ನಿಮ್ಮಲ್ಲಿ ಪ್ರತಿಯೊಬ್ಬರೂ ಶಾಂತಿಯಿಂದಿರಬೇಕೆಂದು ನಾನು ಬಯಸುತ್ತೇನೆ,
ನಿಮಗೆ ಅತ್ಯಂತ ಆಪ್ತರಾದವರೊಂದಿಗೆ.
ಈ ಶಾಂತಿಯ ಸ್ಥಿತಿಯನ್ನು
ನಿಮ್ಮ ಮಾನವ ತಿಳುವಳಿಕೆ ಮತ್ತು ಸಂಬಂಧಗಳೊಂದಿಗೆ ಹೋಲಿಸಿ ನೋಡಿದಾಗ,
ನೀವು ಕಲ್ಪಿಸಿಕೊಳ್ಳುವುದಕ್ಕಿಂತಲೂ ಈ ಶಾಂತಿ ಮಿಗಿಲಾಗಿದೆ.
ನನ್ನ ಶಾಂತಿಯು ನಿಮ್ಮ ಗ್ರಹಿಕೆಗಳು, ನಿರೀಕ್ಷೆಗಳು
ಮತ್ತು ತಿಳುವಳಿಕೆಗಳನ್ನು ಮೀರಿದೆ.
ನಾನು ನಿಮಗೆ ನೀಡುವ ಶಾಂತಿ ಪೂರ್ಣವಾದುದು, ಅರ್ಧವಲ್ಲ.
ನಾನು ನಿಮಗೆ ನೀಡುವ ಶಾಂತಿ ಬೆಳಕಾಗಿದೆ, ಕತ್ತಲೆಯಲ್ಲ.
ನಾನು ನಿಮಗೆ ನೀಡುವ ಶಾಂತಿ ನನ್ನದು, ನಿಮ್ಮದಲ್ಲ.
ನಾನು ನಿಮಗೆ ನೀಡುವುದನ್ನು ಸ್ವೀಕರಿಸಿ
ಮತ್ತು ಈ ಕೊಡುಗೆಯು ನಿಮಗೆ ಅತ್ಯಂತ ಆಪ್ತರಾದವರಿಗೂ ದೊರೆಯಲಿ.
ನೀವು ಏಕೆ ಆಶೀರ್ವಾದ ಹೊಂದಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದಿಲ್ಲ.
ನನ್ನ ಶಾಂತಿಯನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ ಮತ್ತು ಅದನ್ನು ಇತರರಿಗಾಗಿ ಬಳಸಿಕೊಳ್ಳಿ.
ನನ್ನ ಶಾಂತಿಯು ನಿಮ್ಮನ್ನು ಬದಲಾಯಿಸಿ ಬಲಪಡಿಸುತ್ತದೆ.
ನನ್ನ ಶಾಂತಿಯು ನಿಮ್ಮನ್ನು ನನ್ನ ಬಳಿಗೆ ತರುತ್ತದೆ.
ಇದಕ್ಕಾಗಿ ಬೇಡಿಕೊಳ್ಳಿ.
ಭಯಪಡಬೇಡಿ,
ನಿಮ್ಮಲ್ಲಿ ಕಾಣಿಸಿಕೊಳ್ಳಬಹುದಾದ ಬದಲಾವಣೆಗೆ.
ಭಯಪಡಬೇಡಿ,
ನಿಮ್ಮೊಂದಿಗಿರುವವರೊಂದಿಗೆ ಈ ಶಾಂತಿಯನ್ನು ಹಂಚಿಕೊಳ್ಳಲು.
ಈ ಉದ್ದೇಶಕ್ಕಾಗಿ ನಿಮ್ಮನ್ನು ಉಪಯೋಗಿಸಲು ನಾನು ಬಯಸುತ್ತೇನೆ.
ನಾನು ನಿಮ್ಮೊಳಗೆ ನೆಲೆಸಲು ಅವಕಾಶಕೊಡಿ.
ನಿಮ್ಮ ಮಾತುಗಳು ನನ್ನ ಮಾತುಗಳಾಗಿರಲಿ.
ನನ್ನ ಮಾತುಗಳನ್ನು ಕೇಳಬೇಕಾದವರಿಗೆ ಅವು ನಿಮ್ಮ ಮೂಲಕ ಹರಿದುಬರುತ್ತವೆ.
ನಿಮ್ಮನ್ನು ಉಪಯೋಗಿಸಲು ನನಗೆ ಅವಕಾಶಕೊಡಿ. ನಿಮ್ಮನ್ನು ಆಶೀರ್ವದಿಸಲು ನನಗೆ ಅವಕಾಶಕೊಡಿ.
