ಕನ್ನಡ

ಮಾರ್ಗದರ್ಶನ

ನೀನು ದಿಕ್ಕು ಮತ್ತು ಮಾರ್ಗದರ್ಶನಕ್ಕಾಗಿ
  ನನ್ನ ಕಡೆಗೆ ನೋಡುವಾಗ,
  ನಾನು ಉತ್ತರಿಸುವೆನು.
ನಾನು ಆಶೀರ್ವಾದವಾಗಿ ನಿನಗೆ ನೀಡುವ ಉತ್ತರಗಳನ್ನು ಮುಂಚಿತವಾಗಿಯೇ ಊಹಿಸಬೇಡ.

ಅನಿರೀಕ್ಷಿತವಾದ ಸೂಚನೆಗಳಿಗೂ
  ಪ್ರಭಾವಗಳಿಗೂ ಕಿವಿಗೊಡು.
ಆಗಾಗ ಪ್ರಾರ್ಥಿಸು;
  ಇದು ನಿನಗೆ
  ಯಾವುದು ಸತ್ಯವೆಂದು ನಿರ್ಧರಿಸಲು ಸಹಾಯ ಮಾಡುತ್ತದೆ.

ಅತಿಯಾಗಿ ಪ್ರತಿಕ್ರಿಯಿಸಬೇಡ,
  ಏಕೆಂದರೆ ನನ್ನ ಮಾರ್ಗದರ್ಶನವನ್ನು ಕೇಳುವವರ ಮೇಲೂ
  ನನ್ನಿಂದ ದಿಕ್ಕನ್ನು ಅರಸುವವರ ಮೇಲೂ
  ನಾನು ಒತ್ತಡ ಹೇರುವುದಿಲ್ಲ.

ನೀನು ನನಗೆ ಅವಕಾಶ ನೀಡಿದರೆ, ನಾನು ನಿನ್ನ ಜೀವನವನ್ನು ಮಾರ್ಗದರ್ಶಿಸುವೆನು.

ಮುಂದಿನ ಧ್ಯಾನ

ಪರಿವಿಡಿ

ಈ ಪುಟವನ್ನು ಹಂಚಿಕೊಳ್ಳಿ: