ಕನ್ನಡ

ಸಂತೃಪ್ತಿ

ನೋಡು ಮತ್ತು ನನ್ನ ಯೋಜನೆಯನ್ನು ಕಾಣು.
ಆಲಿಸು ಮತ್ತು ನನ್ನ ಮಾರ್ಗದರ್ಶನವನ್ನು ಕೇಳು.

ಗಮನಿಸು ಮತ್ತು ನನ್ನ ನಿಯಂತ್ರಣವನ್ನು ಅರಿತುಕೋ.
ನನ್ನ ಸಾನ್ನಿಧ್ಯದಲ್ಲಿ ಆನಂದಿಸು ಮತ್ತು ಅದನ್ನು ಸ್ವೀಕರಿಸು.

ನೀನು ಇದಕ್ಕಿಂತ ಹೆಚ್ಚಿನ ಯಾವ ಆನಂದವನ್ನು ಅರಸಬಲ್ಲೆ?
ಇದಕ್ಕಿಂತ ಹೆಚ್ಚಿನ ಯಾವ ಸಂತೃಪ್ತಿಯನ್ನು ಪಡೆಯಲು ಸಾಧ್ಯ?
ಇದಕ್ಕಿಂತ ಹೆಚ್ಚು ಫಲಪ್ರದವಾದ ಶಾಂತಿ ಯಾವುದು?
ಇದಕ್ಕಿಂತ ಹೆಚ್ಚು ಸತ್ಯವಾದ ಗುರಿ ಯಾವುದು?

ನನ್ನ ಸತ್ಯವನ್ನು ಅರಸು ಮತ್ತು ಕಂಡುಕೋ.
ನಿನಗಾಗಿ ಇರುವ ನನ್ನ ಯೋಜನೆಯನ್ನು ಹುಡುಕು ಮತ್ತು ಕಂಡುಕೋ.
ನಿನಗಾಗಿ ಮೀಸಲಿಟ್ಟಿರುವ ನನ್ನ ಶಾಂತಿಯಲ್ಲಿ ಆನಂದಿಸು.
ಬೇರೆ ಯಾವುದೂ ನಿನಗೆ ತೃಪ್ತಿಯನ್ನು ತರುವುದಿಲ್ಲ.

ಮುಂದಿನ ಧ್ಯಾನ

ಪರಿವಿಡಿ

ಈ ಪುಟವನ್ನು ಹಂಚಿಕೊಳ್ಳಿ: