ಕನ್ನಡ

ಇದ್ದಿಲಿನ ಬೆಂಕಿ

ರಾತ್ರಿಯಿಂದ ರಾತ್ರಿಗೆ,
ಚಳಿಯಲ್ಲೂ ಭಯದಲ್ಲೂ,
ಇದ್ದಿಲಿನ ಬೆಂಕಿಯ ಬಳಿ ನಿಂತಿದ್ದೆ ನಾನು,

ಅಲ್ಲಿ ಮೈ ಕಾಯಿಸಿಕೊಳ್ಳುತ್ತಾ,
ಶಪಿಸಿ ಆಣೆಯಿಟ್ಟು,
ನಾನೊಬ್ಬ ಸುಳ್ಳುಗಾರನೆಂದು ತೋರಿಸಿಕೊಂಡೆ.

“ಗಲಿಲಾಯದಿಂದ ಬಂದ,
ಅತ್ಯಂತ ಸೌಮ್ಯರಾದ ಅವರ ಗೆಳೆಯನು
ನೀನೇ ಅಲ್ಲವೇ?”

ಹುಂಜ ಕೂಗಿತು.
“ನೀನು ಹೇಳುವ ಆ ವ್ಯಕ್ತಿಯನ್ನು
ನಾನು ಅರಿಯೆನು.”

ಆದರೆ ಆಗ ಅವರು ತಿರುಗಿದರು,
ಅವರ ನೋಟದಿಂದ ಹೊತ್ತಿದ ಜ್ವಾಲೆಯೊಂದು
ನನ್ನೊಳಗೆ ಉರಿಯಿತು,

ಅದರಿಂದ ನಾನು ಅತ್ತೆ,
ಉಳಿಸಿಕೊಳ್ಳದ ಆಣೆಗಳಿಗಾಗಿ,
ನನ್ನ ಉತ್ಸಾಹಹೀನ ದಿನಗಳೆಲ್ಲಕ್ಕಾಗಿ.

ಅವರ ವಿಚಾರಣೆ ನಡೆದಾಗ
ನಾನು ಅವರನ್ನು ನಿರಾಕರಿಸಿದೆ,
ಆ ಪರೀಕ್ಷೆಯಲ್ಲಿ ಸೋತುಹೋದೆ,

ಉಳಿದವರೆಲ್ಲರೂ ಅವರನ್ನು ಕೈಬಿಟ್ಟರೂ,
ಅವರೊಡನೆ ಸಾಯುವೆನೆಂದು
ನಾನು ವಾಗ್ದಾನ ಮಾಡಿದ್ದರೂ.

ಪಶ್ಚಾತ್ತಾಪದಿಂದ ತುಂಬಿದ ಮನಸ್ಸು,
ಖಾಲಿಯಾದ ಬಲೆಗಳೊಂದಿಗೆ,
ನನ್ನ ಹಿಂದಿನ ಕಸುಬಿಗೆ ಮರಳಿದೆ.

ಆದರೆ ಬೆಳಗಾದಾಗ,
ಇದ್ದಿಲಿನ ಬೆಂಕಿ ಉರಿಯುತ್ತಿದ್ದಾಗ,
ಅವರು ನನ್ನ ಹೆಸರನ್ನು ಕರೆದರು.

ಈಗ ದಡದಲ್ಲಿ,
ನಾನು ಅವರ ಗೆಳೆಯನಾಗಿರುವೆನೇ ಎಂದು
ಅವರು ಮತ್ತೊಮ್ಮೆ ಕೇಳುತ್ತಾರೆ

ಮತ್ತು ಮರಳಿನ ಮೇಲೆ,
ಚುಚ್ಚಲ್ಪಟ್ಟ ಕೈಗಳಿಂದ,
ತಮ್ಮ ಕುರಿಗಳನ್ನು ಪಾಲಿಸಲು ನನಗೆ ಒಪ್ಪಿಸುತ್ತಾರೆ.

-ಫಾ. ತಿಮೊಥಿ ಜೆ. ಡ್ರೇಪರ್

ಇನ್ನಷ್ಟು ಕವನಗಳು

ಪವಿತ್ರ ವಾರ ಮತ್ತು ಪಾಸ್ಕ ಹಬ್ಬದ ಪ್ರಾರ್ಥನೆಗಳು

ಪ್ರಮುಖ ಚಿತ್ರ: Jan van de Venne, ಸಾರ್ವಜನಿಕ ಸ್ವಾಮ್ಯ, Wikimedia Commons ಮೂಲಕ

ಈ ಪುಟವನ್ನು ಹಂಚಿಕೊಳ್ಳಿ: