
ಮುಂದಾಳು – ಕರ್ತರ ದೂತರು ಮರಿಯಮ್ಮನವರಿಗೆ ಸಂದೇಶವನ್ನು ತಿಳಿಸಿದರು.
ಪ್ರತಿವಚನ – ಮತ್ತು ಅವರು ಪವಿತ್ರಾತ್ಮರಿಂದ ಗರ್ಭಧರಿಸಿದರು.
(ನಮೋ ಮರಿಯಮ್ಮಾ….)
ಮುಂದಾಳು – ಇಗೋ, ನಾನು ಕರ್ತರ ದಾಸಿ.
ಪ್ರತಿವಚನ – ನಿಮ್ಮ ವಚನದಂತೆ ನನಗಾಗಲಿ.
(ನಮೋ ಮರಿಯಮ್ಮಾ….)
ಮುಂದಾಳು – ಮತ್ತು ವಾಕ್ಯವು ನರರೂಪ ತಾಳಿತು.
ಪ್ರತಿವಚನ – ಮತ್ತು ನಮ್ಮ ನಡುವೆ ವಾಸಿಸಿತು.
(ನಮೋ ಮರಿಯಮ್ಮಾ….)
ಮುಂದಾಳು – ಓ ಪವಿತ್ರ ದೇವಮಾತೆಯೇ, ನಮಗಾಗಿ ಪ್ರಾರ್ಥಿಸಿರಿ.
ಪ್ರತಿವಚನ – ನಾವು ಕ್ರಿಸ್ತರ ವಾಗ್ದಾನಗಳಿಗೆ ಪಾತ್ರರಾಗುವಂತೆ.
ಆಮೆನ್.