ನಿನ್ನ ಹೊರೆಗಳೊಂದಿಗೆ ನನ್ನ ಬಳಿಗೆ ಬಾ.
ಅವುಗಳನ್ನು ನನ್ನ ಪಾದಗಳ ಬಳಿ ಇಡು.
ಅವುಗಳನ್ನು ನನಗೆ ಕೊಡು ಮತ್ತು ನಿನ್ನನ್ನು ಪರಿವರ್ತಿಸಲು ನನಗೆ ಅವಕಾಶಕೊಡು.
ನೀನು ಬಹಳವಾಗಿ ಬಳಲುತ್ತಿದ್ದೀಯೆ.
ನಿನಗೆ ಸಹಾಯ ಮಾಡಲು ನನಗೆ ಅವಕಾಶಕೊಡು.
ಕಳವಳದಿಂದ ನಿನ್ನ ಮನಸ್ಸು ಗೊಂದಲಕ್ಕೊಳಗಾದಾಗ,
ಅದರಿಂದ ನಿನ್ನನ್ನು ಬಿಡಿಸಲು ನನಗೆ ಅವಕಾಶಕೊಡು.
ನಿನ್ನ ಹತಾಶೆಯಿಂದ ನಾನು ನಿನ್ನನ್ನು ಮೇಲೆತ್ತುವೆನು.
ನಿನ್ನನ್ನು ಮುಕ್ತಗೊಳಿಸಲು ನನಗೆ ಅವಕಾಶಕೊಡು.
ಈ ವಾಗ್ದಾನದ ವಿಷಯದಲ್ಲಿ ನನ್ನಲ್ಲಿ ಭರವಸೆಯಿಡು, ಏಕೆಂದರೆ ನೀನು ಅನುಭವಿಸುವ ಯಾವುದೇ ಯಾತನೆಗಿಂತಲೂ ನಿನಗೆ ಶಾಂತಿ ದೊರೆಯಬೇಕೆಂಬ ನನ್ನ ಬಯಕೆ ಹೆಚ್ಚು ಪ್ರಬಲವಾಗಿದೆ.
