ಕನ್ನಡ

ಸಂತ ಅಂದ್ರೇಯರ ಕ್ರಿಸ್ಮಸ್ ನೊವೇನಾ

ಕೆಳಗಿನ ಸಂತ ಅಂದ್ರೇಯರ ಕ್ರಿಸ್ಮಸ್ ನೊವೇನಾ ಪ್ರಾರ್ಥನೆಯನ್ನು ಸಂತ ಅಂದ್ರೇಯರ ಹಬ್ಬವಾದ ನವೆಂಬರ್ 30ರಿಂದ ಕ್ರಿಸ್ಮಸ್ ಮುನ್ನಾದಿನದವರೆಗೆ ಪ್ರತಿದಿನ 15 ಬಾರಿ ಪ್ರಾರ್ಥಿಸುವುದು ಸಂಪ್ರದಾಯವಾಗಿದೆ.

ಕೊರೆಯುವ ಚಳಿಯಲ್ಲಿ ಬೆತ್ಲೆಹೇಮಿನ ಕೊಟ್ಟಿಗೆಯಲ್ಲಿ ಮಧ್ಯರಾತ್ರಿಯಲ್ಲಿ ದೇವಪುತ್ರನು ಪರಮ ಪರಿಶುದ್ಧ ಕನ್ಯೆಯಿಂದ ಜನಿಸಿದ ಆ ಗಳಿಗೆಗೂ ಕ್ಷಣಕ್ಕೂ ವಂದನೆಗಳು; ಅವು ಧನ್ಯವಾಗಲಿ. ಆ ಗಳಿಗೆಯಲ್ಲಿ ನನ್ನ ಪ್ರಾರ್ಥನೆಗಳನ್ನು ಆಲಿಸಿ ನನ್ನ ಬಯಕೆಗಳನ್ನು ಈಡೇರಿಸಲು ಕೃಪೆತೋರೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.

(ನಿಮ್ಮ ಪ್ರಾರ್ಥನಾ ಉದ್ದೇಶಗಳನ್ನು ಇಲ್ಲಿ ತಿಳಿಸಿ)

ಯೇಸು ಕ್ರಿಸ್ತರ ಮತ್ತು ಅವರ ಪರಮ ಧನ್ಯ ಮಾತೆಯ ಮೂಲಕ.

ಆಮೆನ್


ಆಗಮನಕಾಲಕ್ಕಾಗಿ ಇನ್ನಷ್ಟು

ಈ ಪುಟವನ್ನು ಹಂಚಿಕೊಳ್ಳಿ: