
ನನ್ನ ಆತ್ಮವು ಪ್ರಭುವಿನ ಮಹಿಮೆಯನ್ನು ಕೊಂಡಾಡುತ್ತದೆ,
ನನ್ನ ಚೇತನವು ನನ್ನ ರಕ್ಷಕರಾದ ದೇವರಲ್ಲಿ ಹರ್ಷಿಸುತ್ತದೆ,
ಏಕೆಂದರೆ ಅವರು ತಮ್ಮ ದೀನ ದಾಸಿಯ ಮೇಲೆ ಕೃಪಾದೃಷ್ಟಿ ಬೀರಿದ್ದಾರೆ.
ಇಂದಿನಿಂದ ಎಲ್ಲ ಪೀಳಿಗೆಗಳೂ ನನ್ನನ್ನು ಧನ್ಯಳೆಂದು ಕರೆಯುವವು:
ಸರ್ವಶಕ್ತರು ನನಗಾಗಿ ಮಹತ್ಕಾರ್ಯಗಳನ್ನು ಮಾಡಿದ್ದಾರೆ,
ಅವರ ನಾಮವು ಪವಿತ್ರವಾದುದು.
ಅವರಿಗೆ ಭಯಭಕ್ತಿಯಿಂದ ನಡೆದುಕೊಳ್ಳುವವರ ಮೇಲೆ
ಪೀಳಿಗೆಯಿಂದ ಪೀಳಿಗೆಗೆ ಅವರ ಕರುಣೆ ಇರುತ್ತದೆ.
ಅವರು ತಮ್ಮ ಭುಜಬಲವನ್ನು ತೋರಿಸಿದ್ದಾರೆ,
ಅಹಂಕಾರಿಗಳನ್ನು ಅವರ ಗರ್ವದ ಆಲೋಚನೆಗಳಲ್ಲಿಯೇ ಚದರಿಸಿದ್ದಾರೆ.
ಅವರು ಬಲಿಷ್ಠರನ್ನು ಸಿಂಹಾಸನಗಳಿಂದ ಕೆಳಗಿಳಿಸಿದ್ದಾರೆ,
ದೀನರನ್ನು ಮೇಲೇರಿಸಿದ್ದಾರೆ.
ಅವರು ಹಸಿದವರನ್ನು ಒಳಿತುಗಳಿಂದ ತೃಪ್ತಿಪಡಿಸಿದ್ದಾರೆ,
ಶ್ರೀಮಂತರನ್ನು ಬರಿಗೈಯಲ್ಲಿ ಕಳುಹಿಸಿದ್ದಾರೆ.
ಅವರು ತಮ್ಮ ಸೇವಕನಾದ ಇಸ್ರಯೇಲನ ನೆರವಿಗೆ ಬಂದಿದ್ದಾರೆ,
ಏಕೆಂದರೆ ಅವರು ತಮ್ಮ ಕರುಣೆಯ ವಾಗ್ದಾನವನ್ನು ಸ್ಮರಿಸಿದ್ದಾರೆ,
ನಮ್ಮ ಪಿತೃಗಳಿಗೆ,
ಅಬ್ರಹಾಮನಿಗೂ ಅವನ ಸಂತತಿಗೂ ಸದಾಕಾಲಕ್ಕೂ ನೀಡಿದ ವಾಗ್ದಾನವನ್ನು.
ಪಿತನಿಗೂ ಪುತ್ರನಿಗೂ
ಪವಿತ್ರಾತ್ಮನಿಗೂ ಮಹಿಮೆಯಾಗಲಿ:
ಆದಿಯಲ್ಲಿ ಇದ್ದಂತೆ, ಈಗಲೂ,
ಎಂದೆಂದಿಗೂ ಇರಲಿ.
ಆಮೆನ್.