ನೀನು ಏನನ್ನು ಕಾಣುತ್ತೀಯೆ
ನಿನ್ನ ದೃಷ್ಟಿಗಳು ನನ್ನ ಮೇಲೆ ಕೇಂದ್ರೀಕೃತವಾಗಿರುವಾಗ?
ನೀನು ಏನನ್ನು ಕಾಣುತ್ತೀಯೆ
ನೀನು ನನ್ನ ಸೇವಕನಾದಾಗ?
ನಿನ್ನ ಬಳಿ ಏನಿದೆ
ನನ್ನ ದರ್ಶನವಿಲ್ಲದೆ?
ನೀನು ಏನನ್ನು ಗಳಿಸಿರುವೆ
ನಾನು ನಿನ್ನ ಒಡೆಯನಾಗಿರದೆ?
ನಿನ್ನ ದೃಷ್ಟಿಗಳಲ್ಲಿ ನನ್ನನ್ನು ಆಹ್ವಾನಿಸು
ಮತ್ತು ನನ್ನನ್ನು ಇನ್ನಷ್ಟು ಸ್ಪಷ್ಟವಾಗಿ ಕಾಣು.
ನಿನ್ನ ಜೀವನದಲ್ಲಿ ನನ್ನನ್ನು ಆಹ್ವಾನಿಸು
ಮತ್ತು ನಾನು ನಿನ್ನ ದೇವರಾಗಲು ಅವಕಾಶ ಕೊಡು.
ನಿನ್ನ ಹುಡುಕಾಟದ ಅಂತ್ಯ ನಾನೇ.
ಕಾಲ ಕಳೆದರೂ ಮಂಕಾಗದ ಬೆಳಕು ನಾನೇ.
ನಿನ್ನ ನಿಧಿ ನಾನೇ!
ನನ್ನೊಂದಿಗೆ ನಡೆ;
ನನ್ನೊಂದಿಗೆ ಮಾತನಾಡು;
ನನ್ನ ಮಾತನ್ನು ಆಲಿಸು;
ಆಗ ನೀನು ನನ್ನನ್ನು ಅರಿತುಕೊಳ್ಳುವೆ.
ಅಸ್ತಿತ್ವದಲ್ಲಿರುವ ಎಲ್ಲವೂ ನಾನೇ ಎಂದು ನಿನಗೆ ಮನವರಿಕೆ ಮಾಡಿಕೊಡಲು ನನಗೆ ಅವಕಾಶ ಕೊಡು.
ನಿನ್ನೊಂದಿಗಿದ್ದ, ಇರುವ ಮತ್ತು ಇರಲಿರುವ ನಿನ್ನ ದೇವರು ನಾನೇ.
ನಿನ್ನೊಂದಿಗೆ ಇರಲು ನನ್ನನ್ನು ಆಹ್ವಾನಿಸು,
ಆಗ ನಿನ್ನ ದೃಷ್ಟಿ ನನ್ನ ಸ್ವಭಾವದ ಆಳವನ್ನು ತಲುಪುವುದು.
ನಿನ್ನೊಂದಿಗೆ ಇರಲು ನನ್ನನ್ನು ಆಹ್ವಾನಿಸು,
ಆಗ ನೀನು ನನ್ನನ್ನು ಅರಿತುಕೊಳ್ಳುವೆ.
