ಸಹಾಯದ ಅಗತ್ಯವಿರುವವರನ್ನು
ಸಮೀಪಿಸು.
ನಿನ್ನ ನೆರವಿನ ಅಗತ್ಯವಿರುವವರಿಗೆ ಸಹಾಯಮಾಡು,
ಏಕೆಂದರೆ ಕಡಿಮೆ ಹೊಂದಿರುವವರೊಂದಿಗೆ ಹಂಚಿಕೊಳ್ಳಲು
ನಿನ್ನಲ್ಲಿ ಕೊಡುಗೆಗಳಿವೆ.
ಮನಃಪೂರ್ವಕವಾಗಿ ಮುಂದಾಗು ಮತ್ತು ಈ ಕಾರ್ಯದಲ್ಲಿ ನಾನು ನಿನಗೆ ಸಹಾಯಮಾಡುವೆನೆಂದು ಭರವಸೆಯಿಡು.
ನೀನು ನೆರವಾಗಬಹುದಾದ ಅನೇಕ ಅಗತ್ಯಗಳಿವೆ.
ನಿನ್ನ ಪ್ರತಿಭೆಗಳು ಯಾವ ಕ್ಷೇತ್ರಗಳ ಕಡೆಗೆ ಒಲಿಯುತ್ತವೆ ಎಂದು ತೋರುತ್ತದೆಯೋ
ಆ ಕ್ಷೇತ್ರಗಳನ್ನು ಆರಿಸಿಕೊ.
ಸಹಾಯದ ಅಗತ್ಯವಿರುವವರೊಂದಿಗೆ
ನಿನ್ನ ಕೊಡುಗೆಗಳನ್ನು ಹಂಚಿಕೊಳ್ಳುವಾಗ,
ನಿನ್ನ ಮೂಲಕವೂ ನಿನ್ನೊಂದಿಗೂ ಕಾರ್ಯಮಾಡಲು ನನಗೆ ಅವಕಾಶಕೊಡು.
ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ಉದಾರಿಯಾಗಿರು.
ಅನೇಕ ಬಾರಿ,
ಸಹಾಯದ ಅಗತ್ಯವಿರುವವರನ್ನು
ಸಹಾಯಮಾಡಬಲ್ಲವರ ಬಳಿಗೆ ನಾನು ಕರೆತರುತ್ತೇನೆ.
ಅಷ್ಟಾಗಿ ತಿಳಿವಳಿಕೆಯಿಲ್ಲದವರಿಗೆ
ಅಥವಾ ಜ್ಞಾನದ ಅಗತ್ಯವಿರುವವರಿಗೆ ಸಹಾಯಮಾಡು.
ಅವರ ಮಾತುಗಳನ್ನು ಕೇಳು
ಮತ್ತು ಅವರಿಗೆ ಮಾರ್ಗದರ್ಶನ ನೀಡು.
ಇದನ್ನು ನೀಡಲು ನಿನಗೆ ಸಾಧ್ಯವಾಗುವುದಿಲ್ಲವೆಂದು ಭಯಪಡಬೇಡ,
ಏಕೆಂದರೆ ಅಗತ್ಯವಿರುವುದನ್ನು ನೀಡಲು ನಾನು ನಿನಗೆ ಸಹಾಯಮಾಡುತ್ತೇನೆ.
ಈ ಸಹಾಯಕ್ಕಾಗಿ ಕಾಯುತ್ತಿರುವವರ ಕಡೆಗೆ ಹೆಜ್ಜೆಯಿಡು,
ಆಗ ನಿನಗೆ ಅಗತ್ಯವಿರುವುದೆಲ್ಲವನ್ನೂ ಒದಗಿಸಲಾಗುವುದು.
ಅಗತ್ಯದಲ್ಲಿರುವವರಿಗೆ
ಈ ಸೇವೆಯನ್ನು ಸಲ್ಲಿಸಲು ಬೇಕಾದದ್ದು
ನಿನ್ನಲ್ಲಿ ಇಲ್ಲದಿರಬಹುದೆಂದು ಭಯಪಡಬೇಡ.
ನನ್ನ ಯೋಜನೆಯನ್ನು ನೆರವೇರಿಸಲು
ಪ್ರತಿಯೊಬ್ಬರಿಗೂ ಅಗತ್ಯವಿರುವುದನ್ನು ನಾನು ನೀಡುತ್ತೇನೆ.
ನನ್ನಲ್ಲಿ ಭರವಸೆಯಿಡುವವರನ್ನು ನಾನು ಆಶೀರ್ವದಿಸುತ್ತೇನೆ.
ಸಹಾಯಮಾಡುವವರಿಗೂ
ಸಹಾಯ ಪಡೆಯುವವರಿಗೂ ಶಾಂತಿಯನ್ನು ನೀಡಲಾಗುತ್ತದೆ.
ಪ್ರೇರಣೆಯ ಅಗತ್ಯವಿರುವವರನ್ನು
ಹುಡುಕಿಕೊಂಡು ಹೋಗಬೇಡ.
ಅವರ ಅಗತ್ಯಗಳು ಈಡೇರಬೇಕಾದ ಸಮಯದಲ್ಲಿ
ಅವರು ನಿನ್ನ ಮುಂದೆ ಬರುತ್ತಾರೆ.
ಈ ಅಗತ್ಯಗಳನ್ನು ನಿನ್ನ ಮುಂದೆ ಇಟ್ಟಾಗ
ಸಹಾಯಮಾಡಲು ಮನಃಪೂರ್ವಕವಾಗಿ ಮುಂದಾಗು.
