ಯಾವ ಭಯವೂ ನಿನ್ನನ್ನು ತಡೆಯಬಾರದು.
ಯಾವ ಹಿಂಜರಿಕೆಯೂ ನಿನ್ನನ್ನು ಹಿಂದೆ ಸರಿಸಬಾರದು.
ಯಾವ ಸಂದೇಹವೂ ನಿನಗೆ ಅಡ್ಡಿಯಾಗಬಾರದು
ನನ್ನೊಂದಿಗೆ ಸಮಯ ಕಳೆಯಲು.
ಬೇರೆ ಯಾವ ಪ್ರಯತ್ನವೂ ಇದಕ್ಕಿಂತ ಹೆಚ್ಚು ಮಹತ್ವದ್ದಲ್ಲ.
ಬೇರೆ ಯಾವುದಕ್ಕೂ ಕಳೆಯುವ ಸಮಯವು ಇದಕ್ಕಿಂತ ಹೆಚ್ಚು ಸಂತೃಪ್ತಿದಾಯಕವಲ್ಲ.
ಬೇರೆ ಯಾವ ಪ್ರಯೋಜನವೂ ಇದಕ್ಕಿಂತ ಹೆಚ್ಚು ಫಲದಾಯಕವಲ್ಲ.
ನನ್ನೊಂದಿಗೆ ನೀನು ಕಳೆಯುವ ಸಮಯವು ಸಂತೃಪ್ತಿದಾಯಕವಾಗಿದೆ,
ಏಕೆಂದರೆ ನೀನು ನನ್ನನ್ನು ಇನ್ನಷ್ಟು ಅರಿತುಕೊಳ್ಳುವೆ.
ಯಾವ ವರಗಳನ್ನು ಕಂಡುಕೊಳ್ಳಬಹುದು?
ಯಾವ ಜ್ಞಾನವನ್ನು ಪಡೆದುಕೊಳ್ಳಬಹುದು?
ಏಕೆಂದರೆ ನನ್ನ ಬೋಧನೆಯನ್ನು ಸ್ವೀಕರಿಸುವ ಪಾತ್ರೆ ನೀನು,
ಮತ್ತು ನನ್ನ ವಚನಗಳು ತಮ್ಮ ಅನುಗ್ರಹದಿಂದ ನಿನ್ನನ್ನು ಸ್ಪರ್ಶಿಸುವವು.
