ಕನ್ನಡ

ಪೀಠಿಕೆ

ಹೊಸ ವರ್ಷದ ಶುಭಾಶಯಗಳು! ಹೌದು, ನಮ್ಮ ಧರ್ಮಸಭೆಯಲ್ಲಿ ಇದು ಹೊಸ ವರ್ಷ. ಆಗಮನಕಾಲದ ಮೊದಲ ಭಾನುವಾರ ಹೊಸ ಆರಾಧನಾ ವರ್ಷದ ಚಕ್ರಕ್ಕೆ ಚಾಲನೆ ನೀಡುತ್ತದೆ. ಆದ್ದರಿಂದ, ಆಗಮನಕಾಲವು ನಾವೆಲ್ಲರೂ ಹೊಸದಾಗಿ ಆರಂಭಿಸಲು ಒಂದು ಅವಕಾಶವಾಗಿದೆ.

ಇದರ ಬಗ್ಗೆ ಯೋಚಿಸಿ. ಹೊಸದಾಗಿ ಆರಂಭಿಸುವುದು ಒಳ್ಳೆಯದಲ್ಲವೇ? ನಿಮ್ಮ ಜೀವನದಲ್ಲಿ ನೀವು ಹಿಂದೆ ಬಿಟ್ಟುಬಿಡಲು ಅಥವಾ ಬದಲಾಯಿಸಲು ಬಯಸುವ ಸಂಗತಿಗಳಿವೆಯೇ? ಬಹುಶಃ ಅಂಥ ಸಂಗತಿಗಳು ಇದ್ದೇ ಇವೆ; ಹಾಗೆ ಮಾಡಲು ಆಗಮನಕಾಲವೇ ಸೂಕ್ತ ಸಮಯವಾಗಿರಬಹುದು.

ಹೊಸದಾಗಿ ಆರಂಭಿಸುವುದೆಂದರೆ ನಮ್ಮ ಗತಕಾಲವನ್ನು ನಮ್ಮ ದಿವ್ಯ ಪ್ರಭುವಿಗೆ ಒಪ್ಪಿಸುವುದು. ಅಂದರೆ, ನಮ್ಮ ಹಿಂದಿನ ಪಾಪವನ್ನೂ ನೋವನ್ನೂ ಬಿಟ್ಟುಬಿಟ್ಟು, ನಮ್ಮೊಳಗೆ ಪ್ರವೇಶಿಸುವಂತೆ ಯೇಸುವನ್ನು ಬೇಡುವುದು. ಅಂದರೆ, ಹೊಸ ಆರಂಭಕ್ಕಾಗಿ ಅವರ ಕಡೆಗೆ ತಿರುಗಿ, ನಮ್ಮ ಜೀವನದಲ್ಲಿ ಅವರು ನೆರವೇರಿಸಲು ಬಯಸುವ ಎಲ್ಲದರಲ್ಲೂ ಭರವಸೆಯಿಡುವುದು. ಮತ್ತೆ ಆರಂಭಿಸುವ ಸಮಯ ಬಂದಿದೆ!

ಈ ಪುಸ್ತಕದ ಪುಟಗಳು ಪ್ರತಿದಿನ ಸುವಾರ್ತೆಯನ್ನು ಧ್ಯಾನಿಸುವ ಅವಕಾಶವನ್ನು ನಿಮಗೆ ನೀಡುತ್ತವೆ. ಪ್ರತಿಯೊಂದು ಧ್ಯಾನವೂ ಆಯಾ ದಿನದ ದಿವ್ಯಬಲಿಯ ಸುವಾರ್ತೆಯನ್ನು ಆಧರಿಸಿದೆ.

ಆಗಮನಕಾಲವು ಸಿದ್ಧತೆ ಮತ್ತು ನಿರೀಕ್ಷೆಯ ನಿರ್ದಿಷ್ಟ ವಿಷಯವನ್ನು ಅನುಸರಿಸುತ್ತದೆ. ಮೊದಲಿಗೆ, ಲೋಕದ ರಕ್ಷಕರು ಒಂದು ದಿನ ತಮ್ಮ ಪೂರ್ಣ ಮಹಿಮೆಯಲ್ಲಿ ಮರಳಿ ಬರುವರು ಎಂಬ ಸತ್ಯವನ್ನು ನಾವು ಧ್ಯಾನಿಸುತ್ತೇವೆ. ಆ ಸತ್ಯದತ್ತ ದೃಷ್ಟಿಹರಿಸಿ, ಬಹಳ ಭರವಸೆಯಿಂದ ಅದನ್ನು ಎದುರುನೋಡುತ್ತೇವೆ. ಅನಂತರ, ಅವರು ಬಹಳ ಹಿಂದೆಯೇ ಮಗುವಾಗಿ ಬಂದಿದ್ದರು ಎಂಬ ಸಂಗತಿಯನ್ನು ಚಿಂತಿಸುತ್ತೇವೆ. ಅವರು ಕನ್ಯೆಯಿಂದ ಜನಿಸಿ ನಮ್ಮ ನಡುವೆ ವಾಸಿಸಿದರು.

ಆಗಮನಕಾಲದಲ್ಲಿ ನೀಡಲಾದ ಭರವಸೆಯ ನೆರವೇರಿಕೆಯೇ ಕ್ರಿಸ್ತಜಯಂತಿ; ಅದು ದೇವರ ವಾಗ್ದಾನದ ಸಾಕಾರವೂ ಆಗಿದೆ. ದೇವರು ತಮ್ಮನ್ನು ತಾವೇ ತಗ್ಗಿಸಿಕೊಂಡು, ನಜರೇತಿನ ಧನ್ಯ ಮರಿಯಳ ಆರೈಕೆಗೆ ಒಪ್ಪಿಸಲಾದ ಪುಟ್ಟ ಮಗುವಾದರು. ಆಕೆ ದೇವಮಾತೆಯಾದದ್ದು ಮಾತ್ರವಲ್ಲ, ಅನುಗ್ರಹದಲ್ಲಿ ನಮ್ಮ ತಾಯಿಯೂ ಆದಳು.

ಈ ಆಗಮನಕಾಲ ಮತ್ತು ಕ್ರಿಸ್ತಜಯಂತಿಯ ಕಾಲದಲ್ಲಿ ಈ ಪುಸ್ತಕದ ಪುಟಗಳು ನಿಮಗೆ ಸ್ಫೂರ್ತಿ ನೀಡಿ, ನಮ್ಮ ಪ್ರಭುವನ್ನೂ ಅವರ ತಾಯಿಯನ್ನೂ ಇನ್ನಷ್ಟು ಆಳವಾಗಿ ಸಂಧಿಸಲು ನೆರವಾಗಲಿ. ಈ ಹೊಸ ವರ್ಷವು ನಿಮಗೂ ಎಲ್ಲರಿಗೂ ಹೊಸ ಜೀವನದ ಕಾಲವಾಗಲಿ.

ಆಗಮನಕಾಲ – ಮೊದಲ ವಾರ

ಪರಿವಿಡಿ


ಕಾಗದದ ರಟ್ಟಿನ ಮುದ್ರಿತ ಪುಸ್ತಕ & ಇ-ಪುಸ್ತಕ ರೂಪದಲ್ಲಿಯೂ ಲಭ್ಯ

Amazon.com – Google Play – iTunes – Barnes and Noble

 

ಈ ಪುಟವನ್ನು ಹಂಚಿಕೊಳ್ಳಿ: