
ಪವಿತ್ರಾತ್ಮರೇ, ಬನ್ನಿ,
ನಿಮ್ಮ ವಿಶ್ವಾಸಿಗಳ ಹೃದಯಗಳನ್ನು ತುಂಬಿಸಿರಿ
ಮತ್ತು ಅವರಲ್ಲಿ ನಿಮ್ಮ ಪ್ರೀತಿಯ ಅಗ್ನಿಯನ್ನು ಹೊತ್ತಿಸಿರಿ.
ನಿಮ್ಮ ಆತ್ಮರನ್ನು ಕಳುಹಿಸಿರಿ
ಆಗ ಅವರು ಸೃಷ್ಟಿಸಲ್ಪಡುವರು.
ಮತ್ತು ನೀವು ಭೂಮಿಯ ಮುಖವನ್ನು ನವೀಕರಿಸುವಿರಿ.
ಓ ದೇವರೇ, ಪವಿತ್ರಾತ್ಮರ ಬೆಳಕಿನಿಂದ
ವಿಶ್ವಾಸಿಗಳ ಹೃದಯಗಳಿಗೆ ಬೋಧಿಸಿದವರೇ,
ಅದೇ ಪವಿತ್ರಾತ್ಮರ ಮೂಲಕ
ನಾವು ನಿಜವಾಗಿಯೂ ವಿವೇಕಿಗಳಾಗಿ ಸದಾ ಅವರ ಸಾಂತ್ವನವನ್ನು ಅನುಭವಿಸುವಂತೆ ಅನುಗ್ರಹಿಸಿರಿ,
ನಮ್ಮ ಪ್ರಭುವಾದ ಕ್ರಿಸ್ತರ ಮೂಲಕ.
ಆಮೆನ್.
ಈ ಪುಟವನ್ನು ಹಂಚಿಕೊಳ್ಳಿ: