ಕನ್ನಡ

ತಾಳ್ಮೆ

ಪ್ರತಿಯೊಂದು ದಿನದ ಗಂಟೆಗಳೂ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ
  ಬದುಕಿನ ಸಂಘರ್ಷಗಳ ಮೂಲಕ.
ಈ ಪರೀಕ್ಷೆಗಳಿಗೆ ನಿರೀಕ್ಷೆ ಮತ್ತು ಶಾಂತಿಯನ್ನು ತನ್ನಿರಿ.

ನಿಮ್ಮ ಶಾಂತಚಿತ್ತತೆ ಯಾವುದೇ ಸಂಘರ್ಷಕ್ಕೂ ಬೆಳಕನ್ನು ತರಲಿ.
ನೀವು ಪರೀಕ್ಷೆಯಲ್ಲಿ ಜಯಗಳಿಸಲೆಂದೇ ನಿಮ್ಮ ಗುಣಸ್ವಭಾವವನ್ನು ಪರೀಕ್ಷಿಸಲಾಗುತ್ತದೆ.

ಈ ಸಮಯಗಳು ನಿಮ್ಮ ನಿರೀಕ್ಷೆಗಳನ್ನು ಹೆಚ್ಚಿಸಲಿ
  ಮತ್ತು ನಿಮ್ಮ ಕನಸುಗಳನ್ನು ಬೆಳಗಿಸಲಿ.
ಸಂಘರ್ಷವನ್ನು ಆನಂದದಿಂದ ಸ್ವೀಕರಿಸಿ,
  ಏಕೆಂದರೆ ಅದು ನಿಮ್ಮ ಬೆಳವಣಿಗೆಗಾಗಿ ಸೃಷ್ಟಿಯಾಗಿದೆ.
ಅದರ ಕತ್ತಲೆಯ ನೆರಳಿಗೆ ಮಣಿಯಬೇಡಿ.
ನಿಮ್ಮ ಇಡೀ ಅಸ್ತಿತ್ವವನ್ನು ನನ್ನ ಬೆಳಕಿನೊಳಗೆ ತನ್ನಿರಿ.

ಈ ಬೆಳಕು ನಿಮ್ಮ ಚೈತನ್ಯವನ್ನು ಉನ್ನತಿಗೇರಿಸಲಿ
  ಮತ್ತು ನಿಮ್ಮನ್ನು ಹೊಸ
  ಕನಸುಗಳು, ನಿರೀಕ್ಷೆಗಳು ಮತ್ತು ಶಾಂತಚಿತ್ತತೆಯಿಂದ ತುಂಬಲಿ.
ಈ ವರಗಳ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ,
  ಏಕೆಂದರೆ ನೀವು ಚಿಂತಿಸಬೇಕಾಗಿಲ್ಲ
  ಅದರ ಕಾರಣ ಅಥವಾ ಸಮರ್ಥನೆಯ ಕುರಿತು.

ನಾನು ನಿಮಗೆ ಕೊಡುವುದನ್ನು ನನ್ನ ವರವೆಂದು ಸ್ವೀಕರಿಸಿ.
ನನ್ನ ವರಗಳ ಫಲಗಳು
  ನಿಮ್ಮೊಳಗೆ ನೆಲೆಗೊಳ್ಳಲಿ.
ಈ ಫಲಗಳ ಬೆಳಕು
  ನಿಮ್ಮ ಅಂತರಂಗವನ್ನು ಪ್ರವೇಶಿಸಲು ಅವಕಾಶ ನೀಡಿ.

ಮುಂದಿನ ಧ್ಯಾನ

ಪರಿವಿಡಿ

ಈ ಪುಟವನ್ನು ಹಂಚಿಕೊಳ್ಳಿ: