ನಿಮ್ಮಲ್ಲಿ ಪ್ರತಿಯೊಬ್ಬರೂ ಎದುರಿಸುವ
ಅನೇಕ ಕಷ್ಟಗಳನ್ನೂ,
ಅವುಗಳನ್ನು ನೀವು ಪರಿಹರಿಸುವ ರೀತಿಯನ್ನೂ,
ನೀವು ಸಾಧಿಸುವ ಫಲಿತಾಂಶಗಳನ್ನೂ ಪರಿಗಣಿಸಿದಾಗ,
ನೀವು ಹೆಚ್ಚೆಂದರೆ ನಿರೀಕ್ಷಿಸಬಹುದಾದದ್ದು
ಅಲ್ಪ ಯಶಸ್ಸು ಮಾತ್ರ.
ಜೀವನದ ಕಷ್ಟಗಳನ್ನು ಎದುರಿಸುವಾಗ,
ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ನನ್ನ ಕಡೆಗೆ ನೋಡಿ.
ಈ ನಿರ್ಧಾರಗಳನ್ನು ನನಗೆ ಒಪ್ಪಿಸಿಕೊಡಿ
ಮತ್ತು ನಿಮಗೆ ಸಹಾಯ ಮಾಡಲು ನನಗೆ ಅವಕಾಶ ಕೊಡಿ.
ನೀವೇ ಕಂಡುಕೊಳ್ಳಲಾಗದ ಉತ್ತರಗಳಿಗಾಗಿ
ನನ್ನ ಕಡೆಗೆ ನೋಡಿ.
ನಾನು ನಿಮಗೆ ಸತ್ಯವನ್ನು ನೀಡುತ್ತೇನೆ.
ನನ್ನ ಮಾರ್ಗದರ್ಶನವಿಲ್ಲದೆ ಸ್ವತಂತ್ರವಾಗಿರಬೇಕೆಂಬ ನಿಮ್ಮ ಆಲೋಚನೆಗಳ
ಮತ್ತು ಪ್ರಯತ್ನಗಳ ವಿಷಯದಲ್ಲಿ ನಾನು ತಾಳ್ಮೆಯಿಂದಿರುತ್ತೇನೆ.
ನೀವಾಗಿಯೇ ಪ್ರಯತ್ನಿಸುವುದು ಅಗತ್ಯವೆಂದು ನಿಮಗೆ ಅನಿಸುತ್ತದೆ ಎಂಬುದು ನನಗೆ ತಿಳಿದಿದೆ,
ನನ್ನ ಸಹಾಯವಿಲ್ಲದೆ.
ನೀವು ಕಂಡುಕೊಳ್ಳಲಾಗದ ಉತ್ತರಗಳನ್ನು
ನನ್ನನ್ನು ಕೇಳುವವರೆಗೆ ನಾನು ಕಾಯುತ್ತೇನೆ.
ನಿಮಗೆ ರೂಢಿಯಾಗಿರುವುದಕ್ಕಿಂತ ಬೇಗನೆ
ನನ್ನ ಸಹಾಯವನ್ನು ಕೇಳಲು ಕಲಿಯಿರಿ;
ಇದನ್ನು ಸೋಲು ಅಥವಾ ದೌರ್ಬಲ್ಯವೆಂದು ಭಾವಿಸಬೇಡಿ.
