ಕನ್ನಡ

ನನಗೆ ನಿನ್ನ ಬಗ್ಗೆ ಕಾಳಜಿ ಇದೆ

ಭೂಮಿಯ ಮೇಲಿನ ನಿನ್ನ ಜೀವನ ಸೀಮಿತವಾಗಿದೆ.
ಅದನ್ನು ಆ ರೀತಿಯಲ್ಲಿ ರೂಪಿಸಿರುವುದು,
  ನೀನು ನಿನ್ನ ಮುಂದಿರುವುದನ್ನು ಅರಿತುಕೊಂಡು
  ಅದರ ಮೌಲ್ಯವನ್ನು ಮೆಚ್ಚಲೆಂದೇ.
ಹಿಂದಿರುಗಿ ನೋಡಬೇಡ;
  ಮುಂದೆ ನಿನಗಾಗಿ ಕಾಯುತ್ತಿರುವುದರತ್ತ ಮಾತ್ರ
  ದೃಷ್ಟಿ ಹಾಯಿಸು.

ನಿನ್ನ ಕೃತ್ಯಗಳಿಂದ ನೀನು ಅನೇಕ ತಪ್ಪುಗಳನ್ನು ಮಾಡಿದ್ದೀಯೆ.
ಹಾನಿ ಸಂಭವಿಸಿದ್ದರೆ,
  ನಿನ್ನ ತಪ್ಪಿನಿಂದ ಉಂಟಾದ ಪರಿಣಾಮವನ್ನು ಸರಿಪಡಿಸು,
  ಹೀಗೆ ನೀನು ನಿನ್ನ ಹಿಂದೆ ಅನಗತ್ಯ ನೋವನ್ನು ಉಳಿಸಿಹೋಗುವುದಿಲ್ಲ.

ಶಾಂತಿ ಮತ್ತು ಆನಂದದ ನಿರೀಕ್ಷೆಯಿಂದ ಮುಂದೆ ನೋಡು.
ಇದು ನಿನ್ನನ್ನು ಈಗಿನ ಸ್ಥಿತಿಯಿಂದ ಮೇಲೆತ್ತುತ್ತದೆ.
ನಿನಗಾಗಿ ನನ್ನಲ್ಲಿರುವ ಆನಂದದ ಕಡೆಗೆ ನಾನು ನಿನ್ನನ್ನು ನಡೆಸುವೆನು,
  ನೀನು ಈ ಮಾರ್ಗದರ್ಶನವನ್ನು ಕೇಳಿದರೆ.

ನಾನು ಸಹಾಯ ಮಾಡುವುದಿಲ್ಲ ಎಂದು ನೀನು ಭಾವಿಸುತ್ತೀಯಾ?
ನಾನು ಸಹಾಯ ಮಾಡಲಾರೆ ಎಂದು ನೀನು ಭಾವಿಸುತ್ತೀಯಾ?
ನನ್ನ ಸಹಾಯವನ್ನು ಕೇಳಲು ನಿನಗೆ ಸಾಧ್ಯವಿಲ್ಲ ಎಂದು ನೀನು ಭಾವಿಸುತ್ತೀಯಾ?
ಕೇಳು, ಸೂಕ್ತ ಸಂದರ್ಭಗಳಲ್ಲಿ
  ಅದನ್ನು ನಿನಗೆ ನೀಡಲಾಗುವುದು.

ಭಯಪಡಬೇಡ,
  ಏಕೆಂದರೆ ನಾನು ನಿನಗೆ ನೋವುಂಟುಮಾಡುವುದಿಲ್ಲ.
ನಿನ್ನ ಹಿಂಜರಿಕೆಗಳನ್ನು, ಭಯಗಳನ್ನು, ಸಂದೇಹಗಳನ್ನು,
  ಮತ್ತು ನನ್ನನ್ನು ಹುಡುಕದಂತೆ ನಿನ್ನನ್ನು ತಡೆಯುವ ಯಾವುದೇ ಕಾರಣವನ್ನು ಬದಿಗೊತ್ತು.

ನಿನ್ನ ಪೂರ್ಣ ಹಂಬಲದಿಂದ ನನ್ನನ್ನು ಹುಡುಕು,
  ನಿನಗೆ ಅಗತ್ಯವಿರುವ ಎಲ್ಲವನ್ನೂ ನೀಡಲಾಗುವುದು,
  ನಿನ್ನ ಆನಂದ ಮತ್ತು ಸಂತೋಷಕ್ಕಾಗಿ,
  ಭೂಮಿಯ ಮೇಲಿನ ನಿನ್ನ ಜೀವಿತಕಾಲದಲ್ಲಿ.
ಈ ಸಮಯವು ಮುಂದೆ ಬರಲಿರುವುದರ ಆರಂಭವಾಗಬಹುದು.
ನಿನಗೆ ಈ ಕೊಡುಗೆ ದೊರೆಯಬೇಕೆಂದು ನಾನು ಬಯಸುತ್ತೇನೆ.

ಮುಂದಿನ ಧ್ಯಾನ

ಪರಿವಿಡಿ

ಈ ಪುಟವನ್ನು ಹಂಚಿಕೊಳ್ಳಿ: