ಕನ್ನಡ

ನಾನು ವಿಶ್ರಾಂತಿ ಪಡೆಯುವುದು ಸರಿಯೇ?

ನಾನು ವಿಶ್ರಮಿಸುವುದು ಸರಿಯೇ?
ಮುಗಿಸದಿದ್ದರೂ ನನ್ನಿಂದಾದಷ್ಟು ಮಾಡಿದ್ದೇನೆ.
ಮುಗಿಯದ ಕೆಲಸ ನನ್ನನ್ನು ನಾಚಿಕೆಯಿಂದ ತುಂಬಿಸುತ್ತದೆ,
ದೋಷ ನನ್ನ ಮೇಲೇ ಬರುವುದೆಂಬ ಭಯ ಹುಟ್ಟಿಸುತ್ತದೆ.

ಕಣ್ಣು ಮುಚ್ಚಿ ನನ್ನ ತಾಯಿಯ ಜೋಗುಳಗಳನ್ನು
ಕೇಳಲು ನನಗೆ ಅದೆಷ್ಟು ಹಂಬಲ!
ಆದರೆ ನನ್ನ ತಪ್ಪಿನಿಂದ ಏನಾದರೂ ಕೆಡುಕಾದರೆ,
ಅವಳ ಹಾಡಿಗೆ ನಾನು ಯೋಗ್ಯನೇ?

ಅವಳು ಕರುಣಾಮಯಿ, ನನ್ನ ಆತ್ಮವನ್ನು
ಅರಿತುಕೊಳ್ಳುವವಳು ಎಂದು ನಾನು ನಂಬುತ್ತೇನೆ.
ಹಾಗಾದರೆ ಪ್ರೀತಿಯಲ್ಲಿ ಸತ್ಯ ಸಿಗುವುದೇ,
ಅಥವಾ ನಾನು ಆತಂಕವನ್ನೇ ನಂಬಬೇಕೇ?

“ನೀನು ಎಂದೂ ನಿನ್ನಿಂದಾದಷ್ಟು ಮಾಡಲೇ ಇಲ್ಲ”
ಎಂಬ ಯೋಚನೆಯನ್ನು ಶಮನಗೊಳಿಸಲು ಮಗ್ಗುಲು ಬದಲಿಸುತ್ತೇನೆ.
ಆದರೆ ನಾನು ಪಶ್ಚಾತ್ತಾಪಪಡುವ ನೆನಪುಗಳು
ನನ್ನ ಕಳವಳಕ್ಕೆ ಮತ್ತಷ್ಟು ಕಾರಣವಾಗುತ್ತವೆ.

ನನ್ನ ಕಾರಣಗಳನ್ನೆಲ್ಲ ಒಂದೊಂದಾಗಿ ಹೇಳಿಕೊಳ್ಳುತ್ತಾ,
ನನ್ನನ್ನು ನಾನೇ ಸಮರ್ಥಿಸಿಕೊಳ್ಳಲು ಯತ್ನಿಸುತ್ತೇನೆ.
ಆದರೆ ಈಗ ಸಂಪೂರ್ಣ ಎಚ್ಚರಗೊಂಡಿರುವ ನನ್ನ ಸಂದೇಹಗಳನ್ನು
ಎಷ್ಟೇ ಸಂಗತಿಗಳು ಇದ್ದರೂ ದೂರಮಾಡಲಾರವು.

ಆದ್ದರಿಂದ ಅವಳಿಗೆ ಪ್ರಾರ್ಥಿಸಿ ಕಾಯುತ್ತೇನೆ,
ಚಿಂತೆಯು ತಡರಾತ್ರಿಯವರೆಗೂ ಎಚ್ಚರವಾಗಿದ್ದು,
ಯಾವ ತಕರಾರೂ ಇಲ್ಲದೆ ನಿದ್ರಿಸುವವರೆಗೆ,
ನಾನು ಸಂಪೂರ್ಣ ಸಮರ್ಪಣೆಯಲ್ಲಿ ವಿಶ್ರಮಿಸುತ್ತಾ.

ಈ ಪುಟವನ್ನು ಹಂಚಿಕೊಳ್ಳಿ: